Sunday, January 5, 2014

ನಿನ್ನ ಹೆಸರು

ಹೊಸ ಪ್ರೀತಿಯು ಮೂಡಿದೆ ಹೇಗೋ ಎದೆಯಲಿ..
ಗೊತಿಲ್ಲದೆ ಯಾವುದೊ ಕುಷಿಯು ಮನದಲಿ..
ಏನಾದರು ಸಾದಿಸೋ ಚಲವು ನನ್ನಲ್ಲಿ. .
ಇದಕೆಲ್ಲ ಕಾರಣ ನಿನ್ನೆನುವೆ ಎದುರಲ್ಲೇ..

ಏನನೋ ಹೇಳುವ ತವಕ ತುಟಿಯ ತುದಿಯಲ್ಲಿ..
ಸನಿಹಕ್ಕೆ ಬಂದು ಹೇಳಲಾ ನಿನ್ನ ಕಿವಿಯಲ್ಲಿ..
ಕಣ್ ಮುಚದೆ ಕಾಣುವ ಕಾತುರ ಕಣ್ಣಲ್ಲಿ..
ಕಣ್ಮುಚುವ ಮುನ್ನವೇ ಅಪ್ಪಿಕೋ ನಿನ್ನ ತೋಳಲ್ಲಿ..

ಶ್ರಾವಣ ಮಾಸದ ಸುಂದರ ರಾತ್ರಿ ವೇಳೆಲಿ..
ತಂಗಾಳಿಯು ಬಿಸಲು ನಮ್ಮಿಬರ ನಡುವಲಿ..
ಬೆಳದಿಂಗಳ ಚಂದ್ರನ ನೋಡುತ ಜೊತೆಯಲಿ.
ನಿನೆಸರ ಬರೆಯಲೇ ನಕ್ಷತ್ರಗಳ ಪೋಣಿಸಿ..

ಕನಸೊಂದ ಕಂಡಿರುವೆ ನಿನಿರುವಂತೆ ಬದುಕಲಿ..
ವರವ ಕರುನಿಸೆಯ ನಾ ಕೇಳದೆ ನಿನಲಿ..
ನನೆಸರನ್ನು ಇಟ್ಟುಕೊಂಡು ನಿನ್ನ ಹೆಸರ ಜೊತೆಯಲಿ..
ನಾನು ಇದ್ದು ಬಿಡುವೆ ನಿನ್ನ ಉಸಿರ ಉಸಿರಲಿ.. ಸು... ರ..ಇ


Thursday, October 10, 2013

ಪ್ರೀತಿಯ ಒಂದು ಕರೆ

ನಮ್ಮಿಬರ ನಡುವಿನ ಅಂತರ ತುಂಬಾ ದೂರ ಇರಬಹುದು..
ಆದರೆ ಪ್ರೀತಿಯ ನೆಟ್ವರ್ಕ್ ಸಿಕ್ಕೆ ಸಿಗುತ್ತೆ..
ಒಂದು ಮಿಸ್ ಕಾಲ್ ಕೊಟ್ಟು ನೋಡಮ್ಮಿ ನೀನು..
ನನ್ ಎದೆಯ ಕಾಲರ್ ಟ್ಯೂನ್ ನಿನ್ ಹೆಸರಗಿರುತ್ತೆ..
namibara naduvina anthara thumba dooora irabahudu..
adare preethiya network sikke siguthe..
ondu miss call kootu nodammi neenu..
nan edeya caller tune nin hesaragiruthe..

Friday, September 6, 2013

ನಾ ಹೇಗೆ ಜೀವಿಸಲಿ

ಸದಾ ಮುಗುಳ್ನಗೆ ಬೀರುವ ನಿನ್ನ ಮುದ್ದು ಮುಖವ..
ನಾ ಹೇಗೆ ವರ್ಣಿಸಲಿ..
ನನ್ನೊಂದಿಗೆ ನೀ ಹಾಡಿದ ಪ್ರೀತಿಯ ಮಾತುಗಳ..
ನಾ ಹೇಗೆ ಮರೆಯಲಿ..
ನೊಂದಿರುವಾಗ ನೀನೊಂದು ಅಪ್ಪುಗೆಯು ತಂದ ಸಮಾಧಾನವ..
ನಾ ಹೇಗೆ ತಿಳಿಸಲಿ..
ನಿನ್ನಿಲ್ಲಿದ ನನ್ನ ಜೀವನ ಮುತ್ತಿಲ್ಲದ ಚಿಪ್ಪಿನಂತೆ ಇರುವುದು..
ನಾ ಹೇಗೆ ಜೀವಿಸಲಿ..

Friday, July 26, 2013

ನಾನು ಕನ್ನಡಿಗ

ನಾಟಿದೆ ಮನಸಲಿ ಮಾಸದ ಛಲವೊಂದು..
ಮಾತ್ರುಭೂಮಿಯ ಋಣವ ತೀರಿಸಲೆಬೇಕೆಂದು..
ಜೀವ  ತೆತ್ತಾದರೂ ಇದನು ಉಳಿಸಿ ಬೆಳಸಬೇಕೆಂದು..
ಪಣತೋಟ್ಟಿ ಸದಾ ನಿಲ್ಲುವೆ ನಾ ಕನ್ನಡಕ್ಕೆಂದು..


natide manasali masada chalavondu..
mathrubhoomiya runava thirisalebekendu..
jeeva thethadaru idanu oolisi belasabekendu..
panathotti sada nillu na kannadakendu..

Sunday, May 26, 2013

ಮನದ ಕಳವು ನಿನ್ನಿಂದ

ಎಲ್ಲಿಹುದೋ ಗೊತ್ತಿಲ್ಲ ನನ್ನ ಮನವು..
ತಿಳಿಯದೆ ನಡೆದಿದೆ ಅದರ ಕಳವು ..
ಕನಸಿನಲ್ಲಿ ಸಿಕ್ಕಿತ್ತು ನಿನ್ನ ಸುಳಿವು ..
ಪ್ರೀತಿಯಿಂದ ಕಟ್ಟಿಹಾಕಿತು ನನ್ನ ಹೃದಯವು..


Friday, April 26, 2013

ಕರಗಿರುವೆ ನಾ

ಕಲ್ಲಿನಂತ್ತಿದ್ದ ನಾನು ಕರಗಿದ್ದು ನಿನ್ನಿಂದಲೇ..
ಕರಗಿರುವೆ ನಾ ಯಾರ ಕೈಗೆ ಸಿಗದಷ್ಟು ಈಗಾಗಲೇ..
ತುಸು ಕಡೆಗಣಿಸಿದರು ನಾ ಹೋಗಬಹುದು ಸಿಗದಲೇ..
ಸಂರಕ್ಷಿಸು ನೀ ನಿನ್ನ ಹೃದಯದ ಅಂಗಳದಲೇ..kallinantida nannu karagiddu ninindale..
karigiruve na yara kaige sigadastu igagle..
thusu kadeganisidaru na hogabahudu sigadale..
samrakshisu ni ninna hrudayada angaladale..

Saturday, April 6, 2013

ಕಣ್ಸೆಳೆಯುವ ಮುನ್ನ

ನನೆದೆಯ ರಾಣಿಯಾಗಲು ನಿನಗೆ ನಾ ಆಹ್ವಾನವ ಇಟ್ಟಿದೆ..
ನಿನ್ನ ಅನುಕೂಲದಂತೆ ನನ್ನ ಮನವ ನಾ ಸಿಂಗರಿಸಿ ಕೊಟ್ಟಿದೆ..
ನಿನ್ನ ನಗುವಿನಿಂದ ನನ್ನ ಅರಮನೆಯ ನೀ ಅಲಂಕರಿಸಿಬಿಟ್ಟಿದೆ ..
ಇಂದು ನೀನಿಲ್ಲದೆ ಹೃದಯವು ಎಣಿಸದಷ್ಟು ಚಿದ್ರವಾಗಿಬಿಟಿದೆ..
nanedege raniyagalu ninage na ahvanava ittide..
ninna anukuladanthe nan manava na singarisi kottide..
ninna naguvininda nanna aramaneya ni alankarisi bitide..
ninillada indu nanna hrudyavu yenisadastu chidravagide..

Friday, March 22, 2013

ಮನದ ರಾಣಿ

ಮನಸ್ಸಿನಲ್ಲಿ  ಕೆತ್ತಿರುವ ಕುರ್ಚಿಗೆ ಬಣ್ಣ  ಬಳೆದು ನಾ ಕೂತಿರುವೆ ಮಾರಲು..
ನನ್ನ ಮನದ ರಾಣಿ ನೀನು, ನಿನ್ನ  ಆಗಮನಕ್ಕೆ  ನಾ  ಕಾದಿರಲು ..
ನನ್ನ ಬಳಿಬರುವ  ಹಾದಿಗೆ  ನಿನ್ನ  ಮನದ  ಮಾತನೊಮ್ಮೆ ಕೇಳು..
ಕೊಂಡುಕೊಳೆಯ ಇದನ್ನು ನಿನ್ನ  ಪ್ರೀತಿ ಎಂಬ ಅರ್ಥ ಕೊಟ್ಟು? ನಿ  ಹೇಳು...


manasinalli ketiruva kurchige banna baledu na maralu..
nanna manada rani ninu ninna agamanakke na kadiralu..
nanna balibaruva hadige ninna manada mathanomme kelu..
kondukolluveya idanu ninna preetiemba artha kottu? ni helu...

Saturday, February 23, 2013

ಪ್ರೀತಿಯ ಪ್ರಸ್ತಾಪ

ನಿನ್ನ ಕಂಡಾಗಳಿಂದ ನನ್ನ ಮನಸಿಗೆ ಹಿಡಿತವಿಲ್ಲದಂತಾಗಿದೆ,
ಕೈದಿಯ ಬಂಧನದಿಂದ ಹೊರಬಿಟಂತೆ ಖುಷಿಯೂ ಮೊಗದಲ್ಲಿ ಅರಳಿದೆ,
ಮುದುರಿಟ್ಟಸ್ಸೆಗಳ ನಿನೊಂದಿಗೆ ಹಂಚಿಕೊಳ್ಳಲು ನಾ ಕಾದಿರುವೆ,
ನಿನೋಪುಗೆಯ ನಿಡೋಮ್ಮೆ ನಾ ಕುಣಿದು ಕುಪ್ಪಲ್ಲಿಸುವೆ.ninna kandagalinda nan manasige hidithavilldanthangide,
kaidiya bandanadinda bitanthe kushiyu mogadalli aralidhe,
muddutita assegala ninhodige hanchikollalu na kadiruve,
ninopugeya nidomme na kunidu kupallisuve.

Friday, February 15, 2013

ಪ್ರೀತಿಯ ಹೆಸರೇಕೆ

ಓಪ್ಪಿಗೆ ಇಲ್ಲದಮೇಲೆ ಜೊತೆಯಲ್ಲಿ ಸುತಾಡುವುದೇಕೆ..
ಮರಿಯುವ ಮನಸಿದ್ದರೆ ಮುದ್ದು ಮಾಡುವುದೇಕೆ ..
ಬೇಜಾರು ಮಾಡಲು ಇಷ್ಟವಿಲ್ಲದಮೇಲೆ ಕೈಬಿಟ್ಟು ಹೋಗುವುದೇಕೆ ..
ಇದೆಲ್ಲ ಕಾಲ ಕಳಿಯುವುದಕ್ಕೆ ಆದರೆ, ಅದಕ್ಕೆ ಪ್ರೀತಿಯ ಹೆಸರೇಕೆ ..

oppige illadamele jotheyalli suthaduvudeke..
mariyuva manasiddare m
uddu maduvudeke..bejaru madalu istaviladamele kaibittu hoguvudeke..
idella khala kaliyuvudakke adare, adakke preetiya hesareke..